Karnataka Renewable Energy Development Ltd.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)

Search
 RE Projects
Company .
       
  English
ನಮ್ಮ ಬಗ್ಗೆ  
   ವಿವರಣೆ
 
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಸಂಸ್ಥೆಯು ರಾಜ್ಯ ಸರ್ಕಾರದ ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ದಿಪಡಿಸುವುದು/ಅನುಷ್ಟಾನಗೊಳಿಸುವುದು ಹಾಗೂ ಇಂಧನ ಸಂರಕ್ಷಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಂಸ್ಥೆಯ ಮುಖ್ಯ ದ್ಯೇಯೊದೇಶವಾಗಿರುತ್ತದೆ. ಸಂಸ್ಥೆಯು ವಿವಿಧ ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಮತ್ತು ಅಧಿಕೃತವಾಗಿ ಮನ್ನಣೆ ಪಡೆದಿರುವ ಇಂಧನ ಲೆಕ್ಕ ಪರಿಶೋಧಕರುಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ

 
  ಗುರಿ
 
  ಕರ್ನಾಟಕ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು/ಪ್ರಾರಂಬಿಸಲು ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಸಂಸ್ಥೆಯನ್ನು ಸ್ಥಾಪಿಸಲಾಗಿರುತ್ತದೆ. ಈ ಸಂಸ್ಥೆಯ ಮೂಲ ಉದ್ದೇಶವು ಕಿರುಜಲ, ಪವನ, ಸಹ ವಿದ್ಯುತ್, ಜೈವಿಕ, ಸೌರ ಮತ್ತು ಘನ ತ್ಯಾಜ್ಯಗಳಿಂದ ವಿದ್ಯತ್ ಉತ್ಪಾದಿಸಲು ಅಭಿವೃದ್ದಿದಾರರುಗಳು/ಹೂಡಿಕೆದಾರರುಗಳಿಗೆ ಉತ್ತೇಜನ ನೀಡುವುದು ಆಗಿರುತ್ತದೆ. ಈ ಸಂಸ್ಥೆಯು ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸಮಾನಂತರವಾಗಿ ಅಭಿವೃದ್ದಿಪಡಿಸಲು ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ಮಾಹಿತಿಯನ್ನು ಒದಗಿಸುವುದು.

ಕಾನೂನು ಮತ್ತು ನೀತಿಗಳಿಂದ ಉದ್ಬವಿಸಬಹುದಾದ ಸವಾಲುಗಳ ಮೌಲ್ಯಮಾಪನ ಮತ್ತು ಅವಕಾಶಗಳಿಗಾಗಿ, ಕೈಗಾರಿಕೆ, ಹಣಕಾಸು, ಸರ್ಕಾರ ಮತ್ತು ತಾಂತ್ರಿಕ ಪರಿಣಿತರೊಂದಿಗೆ ಒಡಂಬಡಿಕೆಗಳನ್ನು ಏರ್ಪಡಿಸಲು ಸಹಕರಿಸುವುದು. ಶುದ್ದ ಇಂಧನ ಉತ್ಪಾದನೆಯನ್ನು ಉತ್ತೇಜಿಸಲು ರಾಜಕೀಯವಾಗಿ ಕಾರ್ಯಸಾಧ್ಯ ಶಿಪಾರಸ್ಸುಗಳನ್ನು ಮಾಡಿಸುವುದು. ರಾಷ್ಟ್ರೀಯ ಮತ್ತು ಪ್ರಾಂತೀಯ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನ ನಿಯಮಗಳ ಆಚರಣೆಯ ಪೂರ್ಣ ಪಟ್ಟಿ ತಯಾರಿಸುವುದು. ನವೀಕರಿಸಬಹುದಾದ ಇಂಧನ ಶಕ್ತಿ ಜಾಲ, ಜಾಗತಿಕ ಪಾಲುದಾರಿಕೆ, ಗುರಿ ಘಟನೆಗಳಿಂದ ಅಂತರಾಷ್ಟ್ರೀಯ ಸಂಧಾನ ವೇದಿಕೆಯ ಮೂಲಕ ಸಂಶೋಧನೆಗಳ ವಿವರಗಳನ್ನು ಪ್ರಕಟಿಸುವುದು. ನವೀಕರಿಸಬಹುದಾದ ಇಂಧನ ಸ್ಥಾನವನ್ನು ಉತ್ತೇಜಿಸಲು ನೀತಿ ಮತ್ತು ಕಾನೂನು ಕ್ರಮಗಳನ್ನು ಬದಲಾವಣೆಗಳನ್ನು ತರುವಲ್ಲಿ ತ್ವರಿತವಾಗಿ ಪ್ರತಿಕ್ರಯಿಸುವುದು.

 
.
ಹಕ್ಕು ತ್ಯಾಗ : ಈ ವೆಬ್ ಸೈಟನ್ನು ಕೆ.ಆರ್.ಇ.ಡಿ.ಎಲ್ ನ, ಎಂ.ಐ.ಎಸ್ ವಿಭಾಗದವರು ವಿನ್ಯಾಸಗೊಳಿಸಿ ನಿರ್ವಹಣೆ ಮಾಡುತ್ತಿದ್ದಾರೆ.
                                                    ಈ ವೆಬ್ ಸೈಟನ್ನು ಕನಿಷ್ಠ IE 8.0 ಹಾಗೂ ರೆಸುಲ್ಯೂಷನ್ 1024 x 768 ನಲ್ಲಿ ವೀಕ್ಷಿಸಬಹುದು.      
    
ಸಂಪರ್ಕ ವಿವರಗಳು
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
ದೂರವಾಣಿ ಸಂಖ್ಯ:080- 22207851/ 22208109
ಫ್ಯಾಕ್ಸ್ : 080-22257399
ಇಮೇಲ್:kredlmd@gmail.com