ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

Karnataka Renewable Energy Development Ltd.

(A Government of Karnataka Enterprise)

         
    English
. About EC Activities of KREDLTips for EC & EE                                               Gallery
   ಇಂಧನ ಸಂರಕ್ಷಣೆ
ಇಂಧನ ಸಂರಕ್ಷಣೆ:ಇಂಧನ ಸಂರಕ್ಷಣೆಯು ಕಡಿಮೆ ಇಂಧನ ಬಳಸುವುದನ್ನು ಸೂಚಿಸುತ್ತದೆ. ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಗೂ ವ್ಯತ್ಯಾಸವಿದ್ದು, ಒಂದು ನಿರ್ದಿಷ್ಟ ಕೆಲಸಕ್ಕೆ ಕಡಿಮೆ ಇಂಧನ ಬಳಸುವುದು ಇಂಧನ ಸಂರಕ್ಷಣೆಯಾಗಿರುತ್ತದೆ. ಒಂದು ನಿಗದಿತ ಅಂತರವನ್ನು ತಲುಪಲು ಹೆಚ್ಚು ಮೈಲೇಜ್ ಕೊಡುವ ವಾಹನ ಬಳಸುವುದು ಇಂಧನ ದಕ್ಷತೆಯಾಗಿದ್ದು ಆದರೆ ಅದೇ ಅಂತರವನ್ನು ಕಡಿತಗೊಳಿಸಿ ಕ್ರಮಿಸುವುದು ಇಂಧನ ಸಂರಕ್ಷಣೆಗೆ ಉದಾಹರಣೆಯಾಗಿರುತ್ತದೆ.

ದೇಶದ ಆರ್ಥಿಕ ಅಭಿವೃದ್ದಿಗೆ ಇಂಧನವು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ದಿನೇ ದಿನೇ ಇಂಧನ ಬೇಡಿಕೆಯು ಹೆಚ್ಚುತ್ತಿರುವು ದರಿಂದ ಇಂಧನ ಬೇಡಿಕೆ ಮತ್ತು ಪೂರೈಕೆಯಲ್ಲಿ ಬಹಳ ಅಂತರವಿದ್ದು ಈ ಅಂತರವನ್ನು ಕಡಿಮೆ ಮಾಡಲು ಹಾಗೂ ಬೇಡಿಕೆಯನ್ನು ಪೂರೈಸಲು ಹೇರಳ ಹೂಡಿಕೆಯ ಅವಶ್ಯಕತೆಯಿರುತ್ತದೆ. ಹಾಲಿ ಇರುವ ಇಂಧನವು ಸೀಮಿತವಾಗಿವೆ ಹಾಗೂ ಗೊತ್ತಿರುವ ಇಂಧನ ಸಂಪನ್ಮೂಲಗಳು ಖಾಲಿಯಾಗುತ್ತಿರುವುದರಿಂದ ಹಾಲಿ ಇರುವ ಸಂಪನ್ಮೂಲಗಳನ್ನು ಸಂರಕ್ಷಿಸಲು ಇಂಧನ ಮಿತವ್ಯಯದ ಬಗ್ಗೆ ಗಮನಹರಿಸುವುದು ಅವಶ್ಯವಾಗಿರುತ್ತದೆ.

ಕಟ್ಟಡಗಳು ತಮ್ಮ ನಿರ್ಮಾಣ ಮತ್ತು ನಿರ್ವಹಣೆ ಸಲುವಾಗಿ ಹೆಚ್ಚು ಇಂಧನವನ್ನು ಬಳಸಿಕೊಳ್ಳುತ್ತಿವೆ. ಲೈಟಿಂಗ್, ಹವಾನಿಯಂತ್ರಣ ಯಂತ್ರಗಳು ಮತ್ತು ನೀರುಣಿಸುವ ಸಾಧನಗಳು ಮಾನವನಿಗೆ ಉತ್ತಮ ಅನುಕೂಲಗಳನ್ನು ಒದಗಿಸುತ್ತದೆ. ಹಾಗೆಯೇ ಹೇರಳವಾಗಿ ವಿದ್ಯುತ್ ನ್ನು ಬಳಸಿಕೊಳ್ಳುತ್ತವೆ. ಆದುದರಿಂದ ವಿದ್ಯುತ್ತಿನ ಬಳಕೆಯನ್ನು ಪರಿಗಣಿಸುತ್ತಾ, ಕಟ್ಟಡಗಳನ್ನು ನಿರ್ಮಿಸುವಾಗ ಅತ್ಯಂತ ಮಿತವ್ಯಯವಾಗಿ ಇಂಧನ ಬಳಕೆಯಾಗುವಂತೆ ವಿನ್ಯಾಸಗೊಳಿಸಬೇಕಾಗಿರುತ್ತದೆ.

ಇಂಧನ ಸಂರಕ್ಷಣೆ ಮತ್ತು ಇಂಧನ ಸಾಮರ್ಥ್ಯವಿರುವ ಉಪಕರಣಗಳನ್ನು ಬಳಸುವುದರಿಂದ ಇಂಧನ ಬೇಡಿಕೆಯನ್ನು ಅತೀ ವೇಗವಾಗಿ ಅಗ್ಗವಾಗಿ ಪೂರೈಸಬೇಕಾಗಿರುತ್ತದೆ. ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ವಿಧಾನಗಳನ್ನು ಕಟ್ಟಡಗಳಲ್ಲಿ ಅಳವಡಿಸುವುದರಿಂಧ ಭಾರತವು ಪ್ರತಿ ವರ್ಷ $ 42 ಬಿಲಿಯನಷ್ಟು ಹಣವನ್ನು ಉಳಿಸಬಹುದಾಗಿರುತ್ತದೆ. ಜಾಗತಿಕ ತಾಪಮಾನ ಮತ್ತು ಇಂಗಾಲದ ಡೈಆಕ್ಸೈಡ್ ಉಗುಳುವಿಕೆ ಕಡಿಮೆ ಮಾಡಿ ಭೂಮಂಡಲವನ್ನು ಉಳಿಸಿ.
.
ಹಕ್ಕು ತ್ಯಾಗ : ಈ ವೆಬ್ ಸೈಟನ್ನು ಕೆ.ಆರ್.ಇ.ಡಿ.ಎಲ್ ನ, ಎಂ.ಐ.ಎಸ್ ವಿಭಾಗದವರು ವಿನ್ಯಾಸಗೊಳಿಸಿ ನಿರ್ವಹಣೆ ಮಾಡುತ್ತಿದ್ದಾರೆ.
               ಈ ವೆಬ್ ಸೈಟನ್ನು ಕನಿಷ್ಠ IE 8.0 ಹಾಗೂ ರೆಸುಲ್ಯೂಷನ್ 1024 x 768 ನಲ್ಲಿ ವೀಕ್ಷಿಸಬಹುದು.  
   
ಸಂಪರ್ಕ ವಿವರಗಳು
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
ದೂರವಾಣಿ ಸಂಖ್ಯೆ:080- 22207851/ 22208109/9480691041.
ಫ್ಯಾಕ್ಸ್ : 080-22257399
ಇಮೇಲ್:kredlmd@gmail.com