ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

Karnataka Renewable Energy Development Ltd.

(A Government of Karnataka Enterprise)

Search
 RE Projects
Company .
       
  English
 
ಜೈವಿಕ ಇಂಧನ
ಜೈವಿಕ ಇಂಧನ ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ಹಸಿರು ಶಕ್ತಿ ಸಸ್ಯಗಳ ದ್ಯುತಿಸಂಶ್ಲೇಷಣೆಯ ಮೂಲಕ ಪಡೆಯುವುದು ಜೀವರಾಶಿಯಾಗಿರುತ್ತದೆ. ಸಾವಯವ ವಸ್ತುಗಳಿಂದ ಪಡೆಯುವ ಶಕ್ತಿಯನ್ನು ಜೈವಿಕ ಇಂಧನ ಎನ್ನಬಹುದು. ಈ ಶಕ್ತಿಯನ್ನು ಮಾನವನು ಪುನಃ ಸಂಪಾದನೆ ಮಾಡಬಹುದು. ಜೈವಿಕ ಇಂಧನವನ್ನು ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಬಹುದು.

            ಗದ್ದೆಯ ಬದಿಯ ಉಳಿಕೆಗಳು (ಭತ್ತದ ಕಡ್ಡಿಗಳು, ಅಥವಾ ಬೇರೆ ಬೆಳಗಳ ಕಡ್ಡಿಗಳು).

            ತೋಟಗಾರಿಕೆ ಬೆಳಗಳ ಉಳಿಕೆಗಳು (ತೆಂಗಿನ ಮರದ, ಎಲೆಗಳು ತೆಂಗಿನ ಸಿಪ್ಪೆ ಇತ್ಯಾದಿ)
            ಕೃಷಿ ಕೈಗಾರಿಕೆಯ ಉಳಿಕೆಗಳು (ತೆಂಗಿನ ಚಿಪ್ಪು, ಕಡಲೆಕಾಯಿ ಸಿಪ್ಪೆ ಇತ್ಯಾದಿ)

ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಉಪಯೋಗಿಸುವ ಇಂಧನ ಶಕ್ತಿಗಳಲ್ಲಿ ಮೂರನೆ ಒಂದು ಭಾಗವು ಜೈವಿಕ ಇಂಧನ ಶಕ್ತಿಯಾಗಿರುತ್ತದೆ. ಭಾರತದಲ್ಲಿ ಜೈವಿಕ ಇಂಧನ ಶಕ್ತಿಯ ಸಾಮರ್ಥ್ಯವು ಸುಮಾರು 19,000 ಮೆ.ವ್ಯಾಟ್ ಗಳಷ್ಟಿದೆ.

ಜೈವಿಕ ಇಂಧನವನ್ನು ಸಾಂಪ್ರದಾಯಿಕ ದಹನ ತಂತ್ರಜ್ಞಾನದಿಂದ ದಹಿಸಿ, ಬಾಯ್ಲರ್ ಗಳಿಂದ ಒತ್ತಡದ ಉಗಿಯನ್ನು ಉತ್ಪತ್ತಿ ಮಾಡಿ ಇದರಿಂದ ಶಕ್ತಿಯನ್ನು ಉತ್ಪತ್ತಿ ಮಾಡಬಹುದು. ಜೈವಿಕ ಇಂಧನವು ಅದು ನೀಡುವ ಲಾಭದಿಂದಾಗಿ, ಯಾವಾಗಲೂ ಒಂದು ಶಕ್ತಿಯ ಪ್ರಮುಖ ಮೂಲವಾಗಿರುತ್ತದೆ ಇದು ನವೀಕರಿಸಬಹುದಾಗಿರತುತ್ತದೆ, ಹೇರಳವಾಗಿ ಲಭ್ಯವಿರುತ್ತದೆ ಮತ್ತು ಇಂಗಾಲ ಮುಕ್ತವಾಗಿರುತ್ತದೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗವನ್ನು ಒದಗಿಸಬಲ್ಲದಾಗಿರುತ್ತದೆ. ಭಾರತದಲ್ಲಿ ಈಗಿರುವ ಜೈವಿಕ ಇಂಧನ ಸುಮಾರು 500 ಮಿಲಿಯ ಮೆಟ್ರಿಕ್ ಟನ್ ಎಂದು ಅಂದಾಜಿಸಲಾಗಿದೆ. ಸುಮಾರು 18,000 ಮೆ.ವ್ಯಾ ನಷ್ಟು ವಿದ್ಯುತ್ ಉತ್ಪಾದನೆಗೆ ಬೇಕಾಗುವಷ್ಟು ಅಂದರೆ ಸುಮಾರು 120 ರಿಂದ 150 ಮಿಲಿಯ ಮೆ. ಟನ್ ನಷ್ಟು ಜೈವಿಕ ಇಂಧನವು ಪ್ರತಿ ವರ್ಷ ಭಾರತದಲ್ಲಿ ಲಭ್ಯವಿದೆ ಎಂದು ಇಂಧನ ಇಲಾಖೆ ನಡೆಸಿದ ಅಧ್ಯಯನದಲ್ಲಿ ಅಂದಾಜಿಸಲಾಗಿದೆ. ದೇಶದಲ್ಲಿರುವ ಜೈವಿಕ ಇಂಧನವನ್ನು ಸೂಕ್ತ ರೀತಿಯಲ್ಲಿ, ಗರಿಷ್ಟ ಮಟ್ಟದಲ್ಲಿ ಉಪಯೋಗಿಸಿಕೊಂಡು ವಿದ್ಯುತ್ತನ್ನು ಉತ್ಪಾದಿಸಲು ಅನುಕೂಲವಾಗುವಂತೆ, ಜೈವಿಕ ಇಂಧನ ಮತ್ತು ಸಹ ವಿದ್ಯುತ್ ಉತ್ಪಾದನೆಯ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗಿದೆ. ಭತ್ತದ ಹೊಟ್ಟು, ಕಡ್ಡಿ, ಹತ್ತಿಯ ಗಿಡದ ಕಡ್ಡಿ, ತೆಂಗಿನ ಚಿಪ್ಪು, ಸೋಯ ಸಿಪ್ಪೆ, ಎಣ್ಣೆ ತೆಗೆದು ಉಳಿದ ಹಿಂಡಿ, ಕಾಫಿಯ ಉಳಿಕೆಗಳು, ಜೈವಿಕ ಶಕ್ತಿಯ ಉತ್ಪತ್ತಿಯಲ್ಲಿ ಬಳಸುವ ಪ್ರಮುಖ ಉರುವಲಾಗಿರುತ್ತದೆ.
.
.
ಹಕ್ಕು ತ್ಯಾಗ : ಈ ವೆಬ್ ಸೈಟನ್ನು ಕೆ.ಆರ್.ಇ.ಡಿ.ಎಲ್ ನ, ಎಂ.ಐ.ಎಸ್ ವಿಭಾಗದವರು ವಿನ್ಯಾಸಗೊಳಿಸಿ ನಿರ್ವಹಣೆ ಮಾಡುತ್ತಿದ್ದಾರೆ.
                              ಈ ವೆಬ್ ಸೈಟನ್ನು ಕನಿಷ್ಠ IE 8.0 ಹಾಗೂ ರೆಸುಲ್ಯೂಷನ್ 1024 x 768 ನಲ್ಲಿ ವೀಕ್ಷಿಸಬಹುದು.    
    
ಸಂಪರ್ಕ ವಿವರಗಳು
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
ದೂರವಾಣಿ ಸಂಖ್ಯ:080- 22207851/ 22208109
ಫ್ಯಾಕ್ಸ್ : 080-22257399
ಇಮೇಲ್:kredlmd@gmail.com