-

Karnataka Renewable Energy Development Ltd.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಯಮಿತ
(A Government of Karnataka undertaking)
 
                                                                                               English  
ಶ್ರೀ ಬಿ. ಎಸ್. ಯಡಿಯೂರಪ್ಪ
ಮಾನ್ಯ ಮುಖ್ಯ ಮಂತ್ರಿ, ಕರ್ನಾಟಕ ಸರ್ಕಾರ

         
ನವೀಕರಿಸಬಹುದಾದ ಇಂಧನ - ಪ್ರಗತಿಯ ವರದಿ
  ಜನವರಿ
- 2020 (ವರೆಗೆ)
ಕ್ರಮ ಸಂಖ್ಯೆ  ನವೀಕರಿಸಬಹುದಾದ
 ಶಕ್ತಿ ಮೂಲಗಳು
.
ಹಂಚಿಕೆಯಾದ ಸಾಮರ್ಥ್ಯ (ಮೆ.ವ್ಯಾ.) ಸ್ಥಾಪಿತ ಸಾಮರ್ಥ್ಯ
(ಮೆ.ವ್ಯಾ.)
ರದ್ದುಗೊಳಿಸಲಾದ ಸಾಮರ್ಥ್ಯ (ಮೆ.ವ್ಯಾ.)
1 ಪವನ 18395.77 4819.34 8254.48
2 ಕಿರುಜಲವಿದ್ಯುತ್ 3010.25 903.46 764.51
3 ಸಹವಿದ್ಯುತ್ 2177.65 1731.16 0.00
4 ಜೈವಿಕ 391.18 134.03 0.00
5 ಘನತ್ಯಾಜ್ಯ 51.00 0.00 0.00
6 ಸೌರಗ್ರಿಡ್ 9743.02 7282.30 362.00
  ಒಟ್ಟು 33768.87 14870.29 9380.99
     LOA LIST - (SolarGrid)  
a) .LOA List of Solar Power Projects allotted under 150MW Capacity at Pavagada Solar Park

b-i) LOA list of Solar Power Projects allotted in Karnataka under 200 MW Capacity  talukwise Tender (allotted 100MW Capacity)

b-ii) LOA list of Solar Power Projects allotted in Karnataka under 100 MW Capacity MW talukwise Tender

c) LOA list of 640MW Talukwar Solar power projects of 860MW tender

d) LOA list of 550 MW Solar power project at Pavagada Solar power park of 1200 MW tender

e) LOA list of 500MW Solar Power project at Pavagada solar park of remaining 650MW tender
Section  Search
Topic .
 
 Proceedings of off grid solar projects for captive use without wheeling and banking  
   
Celebration of Energy Conservation week at KREDL - 2019  
   
The Bureau of Energy Efficiency (BEE) invites Expression of Interest (EoI) from existing Building Owners for Feasibility Study of their Buildings for Converting them into Nearly Zero Energy Buildings (nZEB)  
                              To register your EOI, Please visit    http://forms.gle/rPnkox3wtXrDLgtF6    
   
Paper Notification: implementation of Ultra Mega Renewable Energy park in Koppal, Bidar, Gadag district.  
   
Call 2 : Online Bid Submission of Tender Notification No: KREDL/07/SG/955/2019-20/H.Kodihalli/call 2 Date:20.09.2019  
   
RFP document of Kodihalli  
   

ಕೆ.ಆರ್.ಇ.ಡಿ.ಎಲ್.ನ ದೃಷ್ಠಿಕೋನ ಮತ್ತು ಸಾಧನೆ (ಆಗಸ್ಟ್ - 2019 ವರೆಗೆ)
      ಕರ್ನಾಟಕವು ನವೀಕರಿಸಬಹುದಾದ ಇಂಧನ, ಪವನ, ಜಲ, ಸೌರ ವಿದ್ಯುತ್ ಹಾಗೂ ಇತರೆ ಸಂಪನ್ಮೂಲಗಳಿಂದ ಕೂಡಿರುತ್ತದೆ.

   
  ಕರ್ನಾಟಕವು ಸುಮಾರು 86792 ಮೆ.ವ್ಯಾಟ್ಸ್ ನಷ್ಟು ನವೀಕರಿಸಬಹದಾದ ಇಂಧನ ಸಾಮರ್ಥ್ಯವನ್ನು ಹೊಂದಿದ್ದು ದೇಶದ ಅಗ್ರ ಐದು ಶ್ರಿಮಂತ ರಾಜ್ಯಗಳಲ್ಲಿ ಒಂದಾಗಿದೆ.

    ಕರ್ನಾಟಕವು ಸುಮಾರು ಕರ್ನಾಟಕವುಸುಮಾರು 33282.15 ಮೆ.ವ್ಯಾಟ್ಸ್ ನಷ್ಟು ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯನ್ನು ಅಳವಡಿಸಿದ್ದು ಅವುಗಳಲ್ಲಿ 13942.37 ಮೆ.ವ್ಯಾಟ್ಸ್ ನಷ್ಟು ನವೀಕರಿಸಬಹುದಾದ ಸಂಪನ್ಮೂಲದ್ದಾಗಿರುತ್ತದೆ.

   
    13942 ಮೆ.ವ್ಯಾಟ್ಸ್ ನಷ್ಟು ನವೀಕರಿಸಬಹುದಾದ ಇಂಧನ ಸಂಚಿತ ಅಳವಡಿಕಾ ಸಾಮರ್ಥ್ಯದೊಂದಿಗೆ ದೇಶದಲ್ಲಿಯೇ ಕರ್ನಾಟಕ ರಾಜ್ಯವು ಪ್ರಥಮ ಸ್ಥಾನದಲ್ಲಿದೆ.

   
    ಆಗಸ್ಟ್ 2019 ರಂತೆ 6407.98 ಮೆ.ವ್ಯಾಟ್ ಅಳವಡಿಕಾ ಸಾಮರ್ಥ್ಯದೊಂದಿಗೆ ಕರ್ನಾಟಕವು ದೇಶದಲ್ಲಿ ಪ್ರಥಮ ರಾಜ್ಯವಾಗಿದೆ.

   
  2016-17 ನ ಹಣಕಾಸಿನ ವರ್ಷದಲ್ಲಿ 425 ಮೆ.ವ್ಯಾಟ್ ಸಾಮರ್ಥ್ಯದ ಪವನ ಶಕ್ತಿಯ ಯೋಜನೆಗಳನ್ನು ಸಾಧಿಸಲು ಗುರಿಯನ್ನು ಹೊಂದಲಾಗಿತ್ತು. ಆದರೆ 882.30 ಮೆ.ವ್ಯಾಟ್ನಷ್ಟು ಸರ್ವಕಾಲಿಕ ದಾಖಲೆಯ ಸೇರ್ಪಡೆ ಸಾಧಿಸಿತು ಮತ್ತು 875 ಮೆ.ವ್ಯಾಟ್ನಷ್ಟು ಸಾಧಿಸಲಾಯಿತು. 2019-20 ಆರ್ಥಿಕ ವರ್ಷದ ಗುರಿ 250 ಮೆ.ವ್ಯಾಟ್ ಆಗಿರುತ್ತದೆ.

   
    ಕೆ.ಆರ್.ಇ.ಡಿ.ಎಲ್. ತನ್ನದೆ ಆದ 12.6 ಮೆ.ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳನ್ನು ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸ್ಥಾಪಿಸುತ್ತಿದೆ.

   
  ಪಾವಗಡ ತಾಲೂಕಿನ ರೈತರ ಒಪ್ಪಿಗೆಯೊಂದಿಗೆ ವಾರ್ಷಿಕ ಭೋಗ್ಯ ಆಧಾರದ ಮೇಲೆ ಪಡೆದ 13000 ಎಕರೆ ಭೂಮಿಯನ್ನು ಒಂದೇ ಬಾರಿಗೆ 2000 ಮೆ.ವ್ಯಾಟ್ ಸೌರ ಶಕ್ತಿ ಉತ್ಪಾದಿಸುವ ವಿಶ್ವದ ವಿಶಿಷ್ಟ ಯೋಜನೆಯನ್ನು ಕರ್ನಾಟಕವು ತುಮಕೂರು ಜಿಲ್ಲೆಯ ಪಾವಗಡದಲ್ಲಿ ವಿಶ್ವದ ಅತಿ ದೊಡ್ಡ ಸೌರ ಪಾರ್ಕ್ (ಕೇಂದ್ರೀಕೃತ ಸೌರ ಉತ್ಪಾದನೆ) ಅನ್ನು ಅಭಿವೃದ್ದಿಪಡಿಸುತ್ತಿದೆ.

   
  ಪಾವಗಡ ಸೌರ ಪಾರ್ಕ್‍ನಲ್ಲಿ ಒಟ್ಟು 2000 ಮೆವ್ಯಾಟ್ ಸಾಮರ್ಥ್ಯದಲ್ಲಿ 1650 ಮೆ.ವ್ಯಾಟ್ ಸಾಮರ್ಥ್ಯದ ಸೌರ ಶಕ್ತಿ ಯೋಜನೆಗಳನ್ನು ಪ್ರಾರಂಭಿಸಿದೆ.

   
  ನೀರಾವರಿ ಉದ್ದೇಶಕ್ಕಾಗಿ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯವು 9725 ಸಂಖ್ಯೆಗಳ ಸೌರ ನೀರು ಪಂಪುಗಳ ವ್ಯವಸ್ಥೆಯನ್ನು ಅನುಮೋದಿಸಿದೆ, ಈ ಅನುಮೋದನೆಯಡಿಯಲ್ಲಿ 5873 ಸಂಖ್ಯೆಗಳಷ್ಟು ಕಾರ್ಯಾರಂಭ ಗೊಂಡಿದ್ದು, ಉಳಿಕೆ ಪ್ರಗತಿಯಲ್ಲಿದೆ.

   
  ಸೋಲಾರ್ ರೂಫ್ ಟಾಪ್ ಪ್ರೊಗ್ರಾಮ್: ಸೌರ ನೀತಿ 2014-21ರ ಪ್ರಕಾರ, ಕರ್ನಾಟಕ ಸರ್ಕಾರವು 400 ಮೆ.ವ್ಯಾಟ್ ಗುರಿಯ ಸಾಮರ್ಥ್ಯವನ್ನು ಪ್ರಾರಂಭಿಸಿದ್ದು, ನಿವ್ವಳ ಮತ್ತು ಒಟ್ಟು ಮೀಟರಿಂಗ್ ಸೌಕರ್ಯದೊಂದಿಗೆ ಕಟ್ಟಡಗಳ ಮೇಲೆ ಸೌರ ಛಾವಣಿಯ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಪ್ರಾರಂಭಿಸಿತು. ಎಸ್ಕಾಂಗಳು ಈ ಯೋಜನೆಯನ್ನು ನಿರ್ವಹಿಸುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ 189 ಮೆ.ವ್ಯಾಟ್ ಸಾಮರ್ಥ್ಯದಷ್ಟು ಈಗಾಗಲೇ ಕಾರ್ಯಾರಂಭಗೊಂಡಿದೆ.

   
  ಇತರೆ ಸೌರ ಮೇಲ್ಚಾವಣಿ ಕಾರ್ಯಕ್ರಮದ ಸಾಧನೆ ಮತ್ತು ಪ್ರಗತಿ ಈ ಕೆಳಕಂಡಂತಿದೆ.
a)   ರಾಜ್ಯಾದ್ಯಂತ 601 ಅಟಲ್‍ಜಿ ಜನಸ್ನೇಹಿ ಕೇಂದ್ರಗಳಿಗೆ 120 Kwp (ಒಟ್ಟು 120 Kwp ) ಸಾಮರ್ಥ್ಯದ ಸೋಲಾರ್ ರೂಫ್ ಟಾಪ್ ಘಟಕಗಳಿಗೆ ಅನಿಯಮಿತ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸಲಾಗಿದೆ.
b) ಮೈಸೂರು ನಗರದಲ್ಲಿ ಸರ್ಕಾರಿ ಕಟ್ಟಡಗಳಿಗೆ ಮತ್ತು ಉದ್ಯಾನವನಗಳಿಗೆ 126 Kwp ಸಾಮರ್ಥ್ಯದ ಸೌರ ಮೇಲ್ಚಾವಣಿ ಘಟಕಗಳನ್ನು ಪ್ರಾರಂಭಿಸಲಾಗಿದೆ.

   
  ಸೋಲಾರ್ ಲಾಂದ್ರ ಕಾರ್ಯಕ್ರಮ: ಕರ್ನಾಟಕ ರಾಜ್ಯದಲ್ಲಿ ಎಲ್ಲಿ ಸುಲಭವಾಗಿ ವಿದ್ಯುತ್ ದೊರೆಯದ ದೂರದ ಗುಡ್ಡಗಾಡು ಪ್ರದೇಶಗಳಿಗೆ 29041 ಸಂಖ್ಯೆಗಳ ಸೋಲಾರ್ ಲಾಂದ್ರಗಳನ್ನು ವಿತರಿಸಲಾಗಿದೆ.

   
  ಎಲ್.ಇ.ಡಿ. ಬೀದಿ ದೀಪಗಳ ಯೋಜನೆ: ರಾಜ್ಯದ ಐದು ವಿತರಣಾ ಕಂಪನಿಗಳ ವ್ಯಾಪ್ತಿಯ 292 ಗ್ರಾಮಗಳಲ್ಲಿ 2280 ಸಂಖ್ಯೆಗಳ 80 ವ್ಯಾಟ್ಸ್ ನ ಹಾಗೂ 33128 ಸಂಖ್ಯೆಗಳ 18 ವ್ಯಾಟ್ಸ್ ನ ಬೀದಿ ದೀಪಗಳನ್ನು ಒದಗಿಸಲಾಗಿದೆ.

   
   PICO ನೀರಿನ ಗಿರಣಿಗಳ ಯೋಜನೆ: 2007 ರಿಂದ ಎಮ್.ಎನ್.ಆರ್.ಇ. ನ ದನಸಹಾಯದೊಂದಿಗೆ ಕರಾವಳಿಯಲ್ಲಿನ ದೂರದ ಗುಡ್ಡಗಾಡಿನ ಒಳ ಪ್ರದೇಶಗಳಲ್ಲಿ ಸುಮಾರು 1400 ಸಂಖ್ಯೆಗಳ PICO ನೀರಿನ ಗಿರಣಿಗಳನ್ನು ಅಳವಡಿಸಲಾಗಿದೆ.

   
  ಕೆ.ಆರ್.ಇ.ಡಿ.ಎಲ್ ಸಂಸ್ಥೆಯು ನವೀಕರಿಸಬಹುದಾದ ಇಂಧನ ಅಭಿವೃದ್ದಿಯ ಸಾಧನೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದೆ ಅವುಗಳಲ್ಲಿ:  
   
a) ಪವರ್ ಅವಾರ್ಡ್ 2017
b) ಕರ್ನಾಟಕ ಸ್ಟೇಟ್ ಎನ್ವಿರಾನ್ಮೆಂಟಲ್ ಅವಾರ್ಡ್ – 2018
 


 
 
   

ಸಂಪರ್ಕ ವಿವರಗಳು
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
ದೂರವಾಣಿ ಸಂಖ್ಯ:080- 22207851/ 22208109
ಫ್ಯಾಕ್ಸ್ : 080-22257399
ಇಮೇಲ್:kredlmd@gmail.com